
ನೆಲೆ?
ಯಾರ ಕೋಪವೂ ಯಾರ ಶಾಪವೋ
ವಿಧಿಯ ಪ್ರಕೊಪವೋ ಅರಿಯೆನು ನಾನು
ಬೆನ್ನು ಬಿದ್ದಿದೆ ಸೋಲಿನ ಬೇತಾಳ,
ಸಮಯ ಮೀರುತಿದೆ, ಸರ ಸರ ಸಾಗುತಿದೆ!
ಮರೆಯಾಗುತಿಹುದು ಕನಸ ನೆಲೆ
ಬತ್ತಿಹೋಗುತಿದೆ ಛಲದ ಜ್ವಾಲೆ
ವತ್ತಡದ ಬದುಕಲಿ,
ಹುಡುಕುತ್ತಿರುವೆ ಓಯಾಸಿಸ್ಸಿನ ನೆಲೆ!.
ಬೆಂದು ಬೆಂಡಾಗಿರುವ ಕಾಯಕ್ಕೆ
ಮತ್ತೇಕೆ ಧಘ ಧಘಿಸುವ ಜ್ವಾಲೆ
ಮಾಡದ ತಪ್ಪಿಗೇಕೆ ಈ ಶಿಕ್ಷೆ?
ಬಿಡದು ಯಾಕಿನ್ನು ಈ ಬತ್ತಿದ ಕಾಯ?
ಹರಿಯೇ ಕೇಳು ನನ್ನ ಮೊರೆಯ
ಚದುರಿ ಹೋದ ಬಾಳಿಗೆ ಕರುಣಿಸು ನೆಲೆಯ
ಸೂತ್ರಧಾರನು ನೀನೆ, ಸೂತ್ರವೂ ನಿನದೆ
ಸವೆದ ಜೀವಕೆ ತೋರು ಮಾರ್ಗವ..........
** ಜಿ. ಕೆ......
No comments:
Post a Comment